ಒಹರೆ ತಾಲ್ ಮಿಲೆ ನದಿಕೆ ಜಲ್ ಮೆ>>>
ಹಿಂದಿ ಮೂಲ: ಇಂದೀವರ್, ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ
ಒಹರೆ..ತೊರೆ ಹರಿದವು ನದಿಯ ಜಲಕೆ
ನದಿ ಹರಿಯೆ ಸಾಗರಕೆ
ಸಾಗರ ಸೇರಿತು ಯಾವ ಜಲಕೇ..
ಕಂಡೋರ್ ಯಾರಯ್ಯಾ
ಒಹರೆ..ತೊರೆ ಹರಿದವು ನದಿಯ ಜಲಕೆ…..
ಸೂರ್ಯನ ಬಳಸಿರೆ ಭೂಮಿ ಚಂದಿರನು ಭೂಮಿಯಾ (2)
ನೀರೊಳಗಿನ ಚಿಪ್ಪು ನೋಡಿ ಬಾಯಾರಿದ ಆತುಮಾ (2)
ಓ ಗೆಳೆಯಾನೇ……..
ತಣಿಸುವ ಹನಿ ಅಡಗಿದ ಮೋಡ
ಕಂಡೋರ್ ಯಾರಯ್ಯಾ
ಒಹರೆ..ತೊರೆ ಹರಿದವು ನದಿಯ ಜಲಕೆ…..
ಕಾಣದ ತುಟಿ ಮೇಲಿದೆ ಏಕೆ ಚಿರಪರಿಚಿತ ಗೀತೆಯು(2)
ನಿನ್ನೆವರೆಗೆ ಅಪರಿಚಿತನು ಇಂದು ಜನುಮದ ಮಿತ್ರನು (2)
ಓ ಗೆಳೆಯಾನೇ……..
ನಿನ್ನೆವರೆಗೆ ಅಪರಿಚಿತನು ಇಂದು ಜನುಮದ ಮಿತ್ರನು
ಯಾವ
ಗಳಿಗೆ
ಏನಾಗುವುದೋ
ಕಂಡೋರ್ ಯಾರಯ್ಯಾ