ಸೋಮವಾರ, ಆಗಸ್ಟ್ 27, 2012

ಒಹರೆ ತಾಲ್ ಮಿಲೆ ನದಿಕೆ ಜಲ್ ಮೆ>>>


ಒಹರೆ ತಾಲ್ ಮಿಲೆ ನದಿಕೆ ಜಲ್ ಮೆ>>>
ಹಿಂದಿಮೂಲ : ಇಂದೀವರ್  ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ
ಚಲನಚಿತ್ರ:ಅನೋಕಿ ರಾತ್(1968)

ಒಹರೆ..ತೊರೆ ಹರಿದವು ನದಿಯ ಜಲಕೆ
ನದಿ ಹರಿಯೆ ಸಾಗರಕೆ
ಸಾಗರ ಸೇರಿತು ಯಾವ ಜಲಕೇ..
ಕಂಡೋರ್  ಯಾರಯ್ಯಾ
ಒಹರೆ..ತೊರೆ ಹರಿದವು ನದಿಯ ಜಲಕೆ…..

ಸೂರ್ಯನ ಬಳಸಿರೆ ಭೂಮಿ   ಚಂದಿರನು ಭೂಮಿಯಾ (2)
ನೀರೊಳಗಿನ ಚಿಪ್ಪು ನೋಡಿ    ಬಾಯಾರಿದ ಆತುಮಾ (2)
ಗೆಳೆಯಾನೇ……..
ತಣಿಸುವ ಹನಿ ಅಡಗಿದ ಮೋಡ
ಕಂಡೋರ್  ಯಾರಯ್ಯಾ
ಒಹರೆ..ತೊರೆ ಹರಿದವು ನದಿಯ ಜಲಕೆ…..

ಕಾಣದ ತುಟಿ ಮೇಲಿದೆ ಏಕೆ     ಚಿರಪರಿಚಿತ ಗೀತೆಯು(2)
ನಿನ್ನೆವರೆಗೆ ಅಪರಿಚಿತನು     ಇಂದು ಜನುಮದ ಮಿತ್ರನು (2)
ಗೆಳೆಯಾನೇ……..
ನಿನ್ನೆವರೆಗೆ ಅಪರಿಚಿತನು  ಇಂದು ಜನುಮದ ಮಿತ್ರನು
ಯಾವ ಗಳಿಗೆ ಏನಾಗುವುದೋ
 ಕಂಡೋರ್  ಯಾರಯ್ಯಾ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ